ಈ post ಹುಟ್ಟಿದ್ದು ಒಂದು ತಿಂಗಳ ಮೊದಲು, ಒಂದು ಕ್ಷಣದಲ್ಲಿ ಹುಟ್ಟಿದ ಬಾವವನ್ನು ಹಾಗೇ ಬರೆಯಲು ತೆಗೆದುಕೊಂಡಿದ್ದು ಒಂದೆರಡು ಗಂಟೆ . ಅದರಿಂದ ಅಲ್ಲಲ್ಲಿ ಅಪ್ರಬುಧ್ಧ ಎನ್ನಿಸಬಹುದಾದರೂ ಇದನ್ನು ಇಲ್ಲಿ publish ಮಾಡದೇ ಇರಲಾರದಾದೆ . ಒಂದು ಕ್ಷಣದ ಕೋಪವನ್ನು ತಡೆಯಲಾರದೆ ಮುಂದೆ ಪರಿತಪಿಸುವುದರ ಬದಲು ....
ಕೆಟ್ಟ ಆವೇಶ ಯಾಕೆ ನಿನಗೆ ಮಾತಿನಲ್ಲಿ
ಪುಟ್ಟ ಕಾರಣವೇ ಸಾಕೇ, ನಿನ್ನ
ಕಟ್ಟು ತಪ್ಪಿ ಹೀಗೆ ಹರಿಯಗೊಡಲು ||
ಕೊಡವು ಬಿದ್ದಿತ್ತು ಮುಂಗುಸಿಯ ಮೇಲೆ
ಒಡನೆ ಸತ್ತಿತ್ತು ತನ್ನದಲ್ಲದ ತಪ್ಪಿಗೆ
ಒಡೆದಿತ್ತು ಹಾಲು ಮರಳಿ ಸರಿಯಾಗದಂತೆ
ಒಂದು ನಿಮಿಷದಾವೇಶದ ಗುರುತಿಗೆ
ಕೋಪ ಮಾಡಿಕೊಳ್ಳಲಾರೆ ಇನ್ನು ಎಂದೆ
ತಾಪ ತಡೆದುಕೊಂಬೆ ಒಳಗೆ ಎಂದೆ
ಪಾಪ! ಮರೆತುಹೋಯಿತೆ ನಿನಗೆ ಅಲ್ಲೇ
ದೀಪ ಬೆಂಕಿಯಾಯ್ತೇ ಗಾಳಿ ಸಿಕ್ಕಿದಲ್ಲೇ
ಒತ್ತರಿಸಿ ಬಂದಿತ್ತಲ್ಲೇ ರೋಷ, ಪಿತ್ತ ಕರಗಿ
ಚಿತ್ತ ಮರುಗಿತ್ತಲ್ಲೇ ದುಡುಕಿಗೆ, ಹುಡುಗುಬುದ್ಧಿಗೆ
ಎತ್ತ ಹೋದರೋ ನಿನ್ನ ದುಡುಕಿಗೆ ಬೇಸರಿಸಿ,
ಪತ್ತೆ ಇಲ್ಲದ ರೀತಿಯಲ್ಲಿ ಅನಂತದೊಳಗೆ
No comments:
Post a Comment