ಉಸಿರುಗಟ್ಟಿಸುವಂತೆ ಕಾಡದಿರು
ಸತ್ತ ಪ್ರೀತಿಯ ಸೂತಕವೇ
ನನ್ನ ಜೀವವ ಬಾಳಗೊಡು
ಮತ್ತಲ್ಲೇ ಚಿಗಿದು ಬೆಳೆಯಲೆಣಿಸದಿರು
ಮರುಜನ್ಮ ಬಯಸುವ ಬಯಕೆಯೇ
ನನ್ನಷ್ಟಕ್ಕೆ ನನ್ನ ಬಿಡು.||ಪ||
ಸಾಲುಗನಸುಗಳ ಹುಚ್ಚು ಮನವೇ
ಕಂಡ ಕನಸು ಕಮರೋ ಮೊದಲೇ
ಮುಂದಿನ ಕನಸಿನ ಗೋಜೇಕೆ.
ಮರಳಿ ಅರಳಬಹುದೇ ಕನಸು
ಎಂದಿತು ಹೃದಯ; ನಿನ್ನ ಜೊತೆಗೆ
ನಿನ್ನದೇ ಇಂತಹ ಜೂಜೇಕೆ||೧||
ಮಾತಾಡಬೇಕಿದ್ದಾಗಲೇ ಉಸಿರೆತ್ತಲಿಲ್ಲ
ಈಗ ಮೌನವೇ ಹಿತವಲ್ಲವೇ
ಯಾರಿಗೆ ಬೇಕು ನಿನ್ನ ಕನವರಿಕೆ.
ಮೌನಕಿರುವ ಸಹನೆ ಮಾತಿಗೆಲ್ಲಿ
ಕಟ್ಟಿದಷ್ಟು ಗಟ್ಟಿಯಾಗುವ ಮೌನವೇ
ಬಿಕ್ಕಿ ಹರಿಯುವ ಬಯಕೆಯಾಕೆ||೨||
ಅನಾದಿ ನೋವಿನ ಬೇಗುದಿಯಿದು
ಕೊರಳಸೆರೆ ಹಿಡಿದರೇನಂತೆ
ಬತ್ತದೆ ಉಮ್ಮಳಿಸುವ ಚಿಲುಮೆ.
ತಡೆಯಲಾರದ ತಾಪವಿದು
ಕರಗಿಹೋಗಿಹವು ಕನಸುಗಳೆಲ್ಲಾ
ಮನದಲಿ ಉನ್ಮಾದದ ಕುಲುಮೆ.||೩||
ಕಾಡದಿದ್ದರೆ ಅದು ಪ್ರೀತಿಯೇ ಅಲ್ಲ ಗೆಳೆಯ. ಗತ ವ್ರಣಗಳ ನಿರಂತರ ಅವ್ಯಕ್ತ ನೋವು ಕಳೆದ ಒಲುಮೆಯ ಸಂಕೇತ.
ReplyDeleteಅಂದಹಾಗೆ ಯಾವುದಾ ಅನಾದಿ ತಂತಿ ಮೀಟುವುದು ನಿಮ್ಮನ್ನ!
ನನ್ನ ಬ್ಲಾಗಿಗೂ ಸ್ವಾಗತ.
ಭಾವ ತೀವ್ರತೆಯ ಕವನ.... ನಿಜಕ್ಕೂ ತುಂಬಾ ಇಷ್ಟವಾಯ್ತು...
ReplyDelete