Wednesday, 20 February 2013

ವೈತರಣಿ



ವೈತರಣಿ , ಬಹಳ ಕಾಡಿದ ಕಥೆ ಅದು. ಒಂದು ತರಹ ಅನುಭವಿಸಿ ಬರೆದಿದ್ದೆ ಅದನ್ನುಹಾಗೆಂದು ಅದೇನೂ ಭಾರೀ ದೊಡ್ಡ ರಚನೆ ಎಂದಾಗಲೀ, ಅದು ನಿಜ ಜೀವನಕ್ಕೆ ಸಂಬಂಧಿಸಿದ್ದೆನ್ದಾಗಲೀ ಅಲ್ಲ. ಆದರೂ ಅದನು ಬರೆಯುವಾಗ ಯಾವುದೋ ಒಂದು ಕ್ಷಣದಲ್ಲಿ ಭಾವುಕನಾಗಿದ್ದುದು ಹೌದು, ವಿನಾಕಾರಣ. ಅದೇ ಗುಂಗಿನಲ್ಲಿ ಬರೆದ ಕವನ. ಇಷ್ಟವಾಗುವುದು ಕಷ್ಟವಿದೆಯೇನೋ, ಸಾಧ್ಯವಾದರೆ ಓದಿ ನೋಡಿ. ನೋಡಿ 
ಕಥೆಯ ಹಿನ್ನೆಲೆ ಬೇಕೆನಿಸಿದರೆ ಒಮ್ಮೆ ಓದಿ ನೋಡಿ ನಮ್ಮ ವೈತರಣಿಯ ಕಥೆಯನ್ನು ಇನ್ನೊಮ್ಮೆ ವೈತರಣಿ  


ಸಾವಿರ ಫ್ರಿಲ್ಲುಗಳನು ಮೆತ್ತಗೆ ಒದೆಯುತ್ತ,
ಆ ತುಂಟ ಕಣ್ಣಲ್ಲೇ ಭಾವಗಳನು ಮಿಡಿಯುತ್ತ,
ನನಸೇ ಕನಸಾಗಿ ಬಂದಿತ್ತೇ ನನ್ನೆದುರು ಎನಿಸುತ್ತ,
ಹೊತ್ತೊಯ್ದ ಕಾಲನಡೆತಡೆಯ ಮೀರಿ ನಿಲ್ಲುತ್ತ,
            ತಿರುಗಿ ಬಾರೊಮ್ಮೆ ನೀ ನನ್ನ  ವಸಂತ
            ನಿನಗಾಗೇ ಕಾದಿರುವೆ ನಾನನವರತ

ಕೂಡಿ ಕಂಡ ಕನಸುಗಳ ಪೂರ್ತಿಮಾಡಲು,
ಮಾರಾಟಕ್ಕಿರದ ಜಗವ ಪುಕ್ಕಟೆ ಕೊಳ್ಳಲು,
ಬೇಲಿಹೂಗಳಿಗೆ ಮುಡಿಯ ಸಗ್ಗ ತೋರಲು ,
ನಿನ್ನ ನೆನಪುಗಳ ಧಾಳಿಯಿಂದ ನನ್ನ ಬಿಡಿಸಲು,
           ನಿಯಾಮಕನ ನಿಯಮಗಳಿಗೆ ಆಗಿ ಸವಾಲು
           ಆಗಿಬಿಡು ನೀ ಮತ್ತೊಮ್ಮೆ ನನ್ನ ಪಾಲು

ಮರೆತೆನೆಂದರೂ ಮರುಕಳಿಸುವ ವೇದನೆಗೆ,
ತಿರುತಿರುಗಿ ಕಾಡುವ ಶೂನ್ಯದ ಯೋಚನೆಗಳಿಗೆ
ದುಃಖವುಕ್ಕಿ ಧುಮ್ಮಿಕ್ಕುವ ದುಃಖದ ನದಿ ನನಗೆ,
ಸಂತೈಸಿ ಬಾಚಿ ಅಪ್ಪಿಕೊಳ್ಳುವ ಶರಧಿ ನೀನಾಗೆ,
          ಒತ್ತರಿಸಿ ಬರುವ ದುಃಖ ಬತ್ತಿ ಹೋಗುವ ಹಾಗೆ
          ಬಾ ವೈತರಣಿ ಬಾ ಸಾವು ಸಾಯುವ ಹಾಗೆ

4 comments:

  1. ಸುಬ್ಬು ಜಿ, ಪ್ರಾಮಾಣಿಕವಾಗಿಯೇ ಹೇಳುತ್ತೇನೆ, ನಿಮ್ಮ ಕವನದ ತೀವ್ರತೆ ನನ್ನ ಸ್ಪಷ್ಟವಾಗಿ ತಟ್ಟಲಿಲ್ಲ, ಬಹುಶಃ ನನ್ನ ಕನ್ನಡ ವೀಕ್ ಆಗಿರುವುದೇ ಇದಕೆ ಕಾರನವಿರಬಹುದು. ಆದರೆ ನಿಮ್ಮ ಕವನದಲಿನ ಪದ-ಪೋಷಣೆ ತುಂಬಾನೇ ಇಷ್ಟವಾಯಿತು, ನನಗೆ ಕಲಿಯುವುದಕ್ಕೆ ಸಿಕ್ಕಿತು. ಇನ್ನು ನಿಮ್ಮ ಬ್ಲಾಗಿನ ಬಗ್ಗೆ, Ufffff ....!!! "ಭಾವಸ್ರಾವ" ಅನ್ನೋ ಪದವೇ ನನ್ನನ್ನ ನಿಮ್ಮಲ್ಲಿಗೆ ಕೊಂಡೊಯ್ಯಲು मजबूर ಮಾಡಿತು. ಕವನವೇ ಹೀಗಿರಬೇಕಾದರೆ ಇನ್ನು "ವೈತರಣಿ" ಬರಹ ಹೇಗಿರಬೇಕೆಂದು ತೆರೆದು ಹಾಗೆ ಒಮ್ಮೆ ನೋಡಿದೆ, ನನ್ನ First Reaction "ಯಪ್ಪಾ ಇಷ್ಟುದ್ದ ಓದ್ಬೆಕಾ...?"

    ಆದರೆ, "ವೈತರಣಿ" ಅನ್ನೋ ರೋಮಾಂಚನ ಮಾಡುವ ಪದವು ನನ್ನ ಅದಾವ ಮಾಯಾಲೋಕಕ್ಕೆ ಕೊಂದೊಯ್ದಿತ್ತೋ ಕಾಣೆ, ಅದನ್ನ ಓದಿ ಮುಗಿಸುವಷ್ಟರಲ್ಲಿ ನನ್ನ ಕಣ್ಣಾಲಿಗಳು ನನಗರಿಯದೆ ತೆವವಾಗಿದ್ದವು...

    ನನ್ನನ್ನ ಈ ರೀತಿಯಾಗಿ ಕಾಡಿದ ಬರಹ ಇದುವರೆಗೂ ಬಂದೆ ಇಲ್ಲಾ ಅಂತಾ ..............

    ನಾನು ಭಾವುಕನಾಗಿದ್ದೇನೆ .......

    ಹೇಳುವುದಿನ್ನೂ ಬೆಟ್ಟದಷ್ಟಿದೆ

    "ವೈತರಣಿ" ಓದಿದ ಮೇಲೆ ನಿಮ್ಮ ಕವನ ಅರ್ಥವಾಯಿತು.....

    ಆದರೆ, ನನಗೆ ನಾನೇ ಅರ್ಥವಾಗದೇ ಹೋದೆ................... [ಹೇಳಲಾಗುತ್ತಿಲ್ಲ]

    ReplyDelete
    Replies
    1. raghavare,
      ತುಂಬಾ ಖುಷಿ ಆಯ್ತು , ಕವನ ಇದೆ ಅಲ್ಲ ಅದು ಒಂದು ತರಹದ ಕನವರಿಕೆ ಅಷ್ಟೇ , ಇಷ್ಟ ಆಗ್ಲಿ ಅಂತ ಬರೆದಿದ್ದೇ ಅಲ್ಲ, in fact ಬ್ಲಾಗಲ್ಲಿ ಹಾಕಬಾರದು ಅಂತ ಇದ್ದೆ , ಆದ್ರೆ ತುಂಬಾ ದಿನ ಆಗಿತ್ತು ಬ್ಲಾಗ್ ಪೋಸ್ಟ್ ಮಾಡಿ ಅದ್ಕೆ ಹಾಕಿದೆ ಅಷ್ಟೇ , ಇಷ್ಟವಾಗುವುದು ಕಷ್ಟವಿದೆಯೇನೋ ಎಂಬ ಹೆದರಿಕೆಯೊಂದಿಗೆ' ಪೋಸ್ಟ್ ಮಾಡಿದ್ದೆ ಬಿಡಿ .

      ವೈತರಣಿ ಕಥೆ ಬರೀವಾಗ ಕಣ್ಣಾಲಿ ಒದ್ದೆ ಆದಂಗೆ ಆಗಿದ್ದು ಹೌದು ನನಗೂನು, ಹಾಗಂತ ಅದು ಭಾರೀ ಗ್ರೇಟ್ ಅಂತ ಏನೂ ಅಲ್ಲ, ಆದರೂ ಯಾಕೋ ಬರೀತಾ ಬರೀತಾ ಆಪ್ತಾವಗುಟ್ಟಾ ಹೋದವಳು ಅವಳು. ಅವಳು ಸಾಯ್ಬೇಕಿದ್ರೆ ಯಾರೋ ಪರಿಚಯದವರು ತೀರಿಕೊಂಡಾಗ ಉಂಟಾಗುವ ಶೂನ್ಯವೇ ಉಂಟಾಗಿತ್ತು ಎಂದರೆ ಅತಿಶಯೋಕ್ತಿ ಅಲ್ಲ ನನ್ನ ಫ್ರೆಂಡ್ ಒಬ್ಬ ಪಿ. ಯು. ದಲ್ಲಿ ಇರ್ಬೇಕಿದ್ರೆ ತೀರಿಕೊಂಡಿದ್ದ . ಆಗ ಹೇಗೆ ಎನಿಸಿತ್ತೋ ವೈತಿ ಸಾಯೋವಾಗ್ಲೂ ಹಾಂಗೆ ಅನ್ಸಿತ್ತು.

      ತುಂಬಾ ಖುಷಿ ಆಯಿತು ನಮ್ಮ ವೈತರಣಿಯನ್ನು ಇಷ್ಟ ಪಟ್ಟಿದ್ದಕ್ಕೆ. :)

      Delete
  2. ವೈತರಣಿಯನ್ನು ಓದಿರಲಿಲ್ಲ...
    ಇವತ್ತು ಓದಿದೆ...
    ವಾವ್ ಅದ್ಭುತ ಕಥೆಯದು...
    ಧನ್ಯವಾದ ಸುಂದರ ಕಥೆಗಾಗಿ...
    ಕವನವೂ ಅಷ್ಟೇ ಸುಂದರ...
    ಅನವರತ ಎಂಥಯ ಪ್ರಶಸ್ತವಾದ ಬಳಕೆ ...
    ಜೊತೆಗೆ "ಮಾರಾಟಕ್ಕಿರದ ಜಗವ ಪುಕ್ಕಟೆ ಕೊಳ್ಳಲು,"
    ಸಹ ಇಷ್ಟವಾಯ್ತು...
    ಕಥೆಯ ಕೊಂಡಿಕೊಟ್ಟು ಉಪಕಾರ ಮಾಡಿದಿರಿ..
    ಬರಲಿ ಇನ್ನಷ್ಟು ಬರಹಗಳು...
    ನಮಸ್ತೆ :)

    ReplyDelete
    Replies
    1. Chinamay,
      ಶಬ್ದಗಳ ಜೋಡಣೆಯ ಬಗೆಗಾಗಲೀ, ಪ್ರಾಸದ ಚಿಂತೆಗಾಗಲೀ ಹೆಚ್ಚು ತಲೆಕೆಡಿಸಿಕೊಳ್ಳದೆ ಬರೆದ ಕವನ .

      ಧನ್ಯವಾದಗಳು , ಖುಷಿ ಆಯ್ತು :) ಮತ್ತೆ ಬನ್ನಿ :)

      Delete