ಹದವ ಮರೆತಿದೆ ಹೃದಯ,
ಬದಲಾಗಿ ಬಿಟ್ಟಿದೆ ಬದುಕು,
ಸಮಯ ಉರುಳಿದೆ ತಿಳಿಯದೇ.
ಸಾವಿರ ’ಜಿಬಿ’ಯ ಮೆದುಳ ತುಂಬ,
ನಿನ್ನ ನೆನಪಿನದೇ ಕಾರುಬಾರು.
ಏನ ಮಾಡಲಿ ನಾ,ಎಲ್ಲಿ ಹೋಗಲಿ,
ಎಲ್ಲ ನಿನ್ನದೇ, ನನ್ನದೆಲ್ಲಾ, ಎಲ್ಲವೂ.
ಹೆಸರಲ್ಲೇ ಖುಷಿಯಿದೆ ರವ*ದಿ,
ಉಸಿರಲ್ಲೇ ಬೆರೆತಿದೆ ಮುದದಿ.
ಬರೆದಾಗಿದೆ ನನ್ನಯ ಭವಿತ ;
ಸಾವಿರ ಭಾವ ಒಮ್ಮೆಲೆ ಮೂಡಿ,
ನನ್ನೆದೆಯು ಕುಸಿದಿತ್ತಲ್ಲೇ,
ಭೂಮಿ ಭಾರವ ಹೊತ್ತಂತೆ.
ಕಳೆದು ಹೋದ ನನ್ನ ನಾನೇ
ಹುಡುಕಾಡಿದೆ ದಡ ಮುಟ್ಟದಂತೆ.
ಯಾರು ನೀನೋ, ಏನು ಮಾಯೆಯೋ
ಏನೂ ತಿಳಿಯದಂತೆ, ಏನು ಮೋಡಿ-
ಮಾಡಿದೆಯೋ ಒಂದು ನೋಟದಲ್ಲಿ .
ನಿನಗೆಲ್ಲಿ ಗೊತ್ತು ನನ್ನೆದೆಯ ಪಾಡು,
ಮುಗಿಲು ಮುಟ್ಟಿದೆ ದಿಗಿಲು ಇಲ್ಲಿ.
ಮರೆವನೇ ಮರೆಯುವ ತರಹದಿ
ಮಾಡಿ ಬಿಟ್ಟಿತ್ತು ನಿನ್ನ ನೆನಪಲೀಲೆ.
*ರವ = ಶಬ್ದ
sakkat bardyo.....
ReplyDeletetiliyitu nanage ninu kavi endu..,
kaaturavu manake e kaviteya moola enendu..,
tilisuveya...geleya...,
ninna e savi hanigavanada spoorti
prachodane yaarendu...?????!!!!!!!!!!!!!!!!
Nice one ! Could you put out the rough translations in English ?? Or shall I do them :) ;)
ReplyDelete@anonymous anusha , ಕೆಲವೊಂದನ್ನು ಹೇಳದೇ ಉಳಿದರೇ ಮಾಧುರ್ಯ ಹೆಚ್ಚು. ಹೇಗೆ ಗಂಡಸಿನ ಸಂಬಳ, ಹೆಂಗಸಿನ ವಯಸ್ಸು ಕೇಳಬಾರದೋ ಹಾಗೆ ಕವಿಯ ಭಾವದ ಮೂಲವೂ ವ್ಯಕ್ತವಾಗದೇ ಹೋದರೇ ಒಳ್ಳೆಯದೇನೋ. ಕಮೆಂಟ್ ಮಾಡಿದ್ದಕ್ಕೆ,ಪ್ರೋತ್ಸಾಹ ಕೊಟ್ಟಿದ್ದಕ್ಕೆ ಧನ್ಯವಾದಗಳು.
ReplyDelete@silent watcher , ಮೇಲ್ ಮಾಡಿದ್ದೇನೆ ನೋಡಿ, ಭಾಷಾಂತರವನ್ನು.