ಇದು ೨೫ನೇ ಪೋಸ್ಟ್. ಎಷ್ಟು ಬೇಗ ಇಷ್ಟು ಬರೆದೆ ಎನ್ನಿಸುತ್ತದೆ. ಈ ಬ್ಲಾಗ್ ಎಂಬ ಮಾಧ್ಯಮ ಇಲ್ಲದೆ ಹೋಗಿದ್ದರೆ ಇಷ್ಟು ಬರೆಯುತ್ತಿರಲಿಲ್ಲ ಎಂಬುದು ದಿಟ. ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳು.
ಅದಿರಲಿ , ಬೇರೇನಾದರೂ ಬರೆಯಬೇಕೆಂದುಕೊಂಡು ಮನಸ್ಸಲ್ಲಿ ತುಂಬಿಕೊಂಡರೂ ಮನಸ್ಸಿನಲ್ಲಿ ಮತ್ತದೇ ಭಾವಲಹರಿ ಮೂಡಿ ಕೂಡುತ್ತಿದೆ. ನನಗೇ ಏಕತಾನತೆ ಎನಿಸುವ ಮಟ್ಟಿಗೆ ಒಂದೇ ವಿಷಯದ ಬಗ್ಗೆ ಬರೆಯುತ್ತಿದ್ದೇನೆ. ಗೊತ್ತಿಲ್ಲ ಎಲ್ಲಿಯವರೆಗೆ ಎಂದು. ಅಷ್ಟಕ್ಕೂ ಎಲ್ಲವೂ ಗೊತ್ತಿದ್ದರೆ ಜೀವನಕ್ಕೆ ಅರ್ಥವೇನು? ಇರಲಿ ಬಿಡಿ. ನನ್ನ ಕವನ, ಅದಾವುದನ್ನೂ ಯೋಚಿಸದೆ ಹಾಗೆ ಸುಮ್ಮನೆ ಓದಿಕೊಳ್ಳಿ.
ಹಿಂದೆ ಮುಂದೆ ನೋಡದೇ ಬಂದು ಬಿಡು ಕನಸೆ
ಎರಡು ಕೈ ಚಾಚಿ ಸ್ವಾಗತಿಸಲು ನನ್ನ ಮನಸಿದೆ
ಆಕರ್ಷಣೆಯ ಮೂಲವೇ ತಪ್ಪಿಹೋದರೇನಂತೆ
ಅದನು ಮೀರಿ ಸೆಳೆದು ಬಿಡುವುದು ನಿನಗೆ ಹೊಸದೆ||ಪ||
ಮೊದಲ ಬಾರಿ ಹುಟ್ಟಿ ಅರಳಿದ ಭಾವನೆಯೇ
ಹೆಸರಿನ ಗೊಡವೆಯೇಕೆ ನಿನಗೆ ಅದು ಬೇಕೆ?
ಪದೆ ಪದೆ ಮನದಾಳ ಕಲಕುವ ಬಯಕೆಯೇ
ನನಗೇ ತಿಳಿಯದೇ ಹೋಗಿದೆ ಏನಿದು ಹಂಚಿಕೆ||೧||
ಯಾವ ರಾಗವೋ ಯಾವ ತಾಳವೋ ತಿಳಿಯದು
ನನಗೆ ತಿಳಿದಿದ್ದು ಒಂದೆ ಅದು ನಿನ್ನ ಅನುರಾಗ
ಚಿಮ್ಮಿ ಬಂದವು ಭಾವದ ಒರತೆ ಕಟ್ಟು ಮೀರಿ
ಭಾವಗಳಭಾವದ ಬರಡುತನವ ನೀಗಿದಾಗ||೨||
ಬರೀ ಮಾತೊಂದಕೆ ಸುತ್ತೆಲ್ಲ ಹೊರಜಗತ್ತು
ಮಸುಕು ಮಬ್ಬಾಗಿದೆ ನನಗೆ ಗೊತ್ತೇ ಇಲ್ಲದೇ
ಕಾದು ಸಾಕಾಗಿದೆ ನಿನ್ನನೇ ಹುಡುಕಿದೆ
ವಲಸೆ ಹೋಗಿದೆ ನನ್ನೆದೆ ತಿರುಗಿ ಬಾರದೆ||೩||
ಹೃದಯ ಬಡಿಯದೆ ನಿಂತಿದೆ ನೀ ಬರಬಹುದೆ ಎಂದು
ನಗೆಯೊಂದನೆಸೆಯಬಾರದೆ ಸಾಕಾಗಿದೆ ನೊಂದು
ಪ್ರೀತಿಯಲಿ ನಾನು ಉನ್ಮತ್ತ ನನಗಾವ ಪ್ರಮೇಯ
ನಶೆ ತಲೆಗೇರಿದೆ ಇಳಿವ ದಾರಿ ತಿಳಿಯದೆ ಅಯೋಮಯ||೪||

No comments:
Post a Comment