ಅಂತೂ ಮುದದ ಪ್ರೀತಿಯ ಏಕತಾನತೆಗೆ ಒಂದು ವಿರಾಮ ಸಿಕ್ಕಿದೆ, ಅಲ್ಪವಿರಾಮವೇ ಇರಬಹುದು. ಅಲ್ಲ ಇದು ಅಲ್ಪವಿರಾಮವೇ. ಏನೇ ಇರಲಿ, ಈ ಕವನ ಇರುವುದು, ಕಳೆದು ಹೋಗುವ ಗೆಳೆಯನ ಬಗ್ಗೆ, ಮಸುಕಾಗಬಹುದಾದ ಗೆಳೆತನದ ಬಗ್ಗೆ. ಯಾರೂ ವೈಯಕ್ತಿಕ ಎಂದುಕೊಳ್ಳಬಾರದು.
ತಿರುಗಿ ಸುರುಮಾಡೆ ನಾನೆಂಬ ಹಠವದೇಕೆ, ಅದೇನು ಹಗೆ
ಪದಗಳಿಗೆ ತಡಕಾಡದೇ ಕೊರಗುವ ಶಬ್ದಮರೆತ ಕವಿಯ ಹಾಗೆ||ಪ||
ಮಾಯದ ಗಾಯಕೆ ಮುಲಾಮು ಹಚ್ಚಿ ಕೆದಕುವ ಮನಸಾಗಿದೆ
ರಾಜಿ ಮಾತಾಡದೇ ಭೇದಕೆ ರಾಜೀನಾಮೆ ಕೊಟ್ಟ ಕನಸಾಗಿದೆ
ಇಷ್ಟು ಹತ್ತಿರ ಬಂದು ದೂರವೇ ಉಳಿದಿದ್ದಕ್ಕೆ ಮುನಿಸಾಗಿದೆ
ನಸುನಗುವಿಗೆ ದಾರಿಯಾಗಲೆಂದು ಜಗಳವೊಂದ ಕರೆಸಾಗಿದೆ||೧||
ಖಾಲಿ ಸಂದೇಶಗಳಲ್ಲಿ ಮಾತು ತುಂಬಿದ್ದವು ಅಲ್ಲವೇ ಗೆಳೆಯ
ಬಿಗುಮಾನದ ಮೌನದಲಿ ಮರೆತು ಹೋಯಿತೆ ಪರಿಚಯ
ಮುನಿದ ಮನಕೆ ಮಾತಾಡಲು, ಆಡದಿರಲು ಬೇಕೆ ಪ್ರಮೇಯ
ಹೇಗೆ ಹುಟ್ಟಿಸಿ ಹೇಳಲಿ ಮಿತ್ರಾ, ಇನ್ನೂ ಹುಟ್ಟೇ ಇಲ್ಲದ ವಿಷಯ||೨||
ಜಗಳವಾದರೆ ಆಗಲಿ ಮೌನ ಹಿತವೆ, ಕಳೆವುದೇ ಅಲವರಿಕೆ
ಮಾತಿಗೆಲ್ಲ ಅಕಾಲಿಕ ಮರಣವಾಗಿ ಶೂನ್ಯ ಕಾಡಿತ್ತು ಯಾಕೆ
ಹಮ್ಮಿನಾವೇಶದ ನಡುವೆ ಕೇಳದೇ, ಈ ಸ್ನೇಹದ ಕನವರಿಕೆ
ಜ್ಞಾನದನ್ವೇಷಣೆಯ ಮಧ್ಯೆ ಆಗಲಿಲ್ಲವೇ ಸಮಯ ಭಾವಗ್ರಾಹಕೆ||೩||
ಸ್ನೇಹದ ನಡುವಿನ ಮುನಿಸು ಸ್ನೇಹವ ಗಟ್ಟಿಗೊಳಿಸಲೆ೦ದೆ? ಭಾವದ ಅಭಿವ್ಯಕ್ತಿ ಚೆನ್ನಾಗಿದೆ. ಅಭಿನ೦ದನೆಗಳು.
ReplyDeleteನೈಸ್...
ReplyDeleteದಾಸರು ಹೇಳಿದ್ದರಲ್ಲವೇ ಭೇದವರಿತು ನಡೆಯದಂಥ ಸ್ನೇಹವಿದ್ದೆತಕೆ ಎಂದು...
ಸ್ನೇಹದಲ್ಲಿ ಮುನಿಸು,ಕೋಪ,ತಾಪ ಎಲ್ಲವೂ ಸಹಜ..
ಚೆನ್ನಾಗಿದೆ....
ಧನ್ಯವಾದಗಳು ಪ್ರಭಾಮಣಿ ಅವರೆ.
ReplyDeleteಮೌನರಾಗ ಅವರೆ ಧನ್ಯವಾದಗಳು. ಸ್ನೇಹದಲ್ಲಿ ಎಲ್ಲವೂ ಸಹಜ ಹೌದಾದರೂ ಈ ಮೌನ ಉಂಟಲ್ಲ ಅದು ಅಸಹನೀಯ. ಅದರ ನೋವು ಮತ್ತಾರಿಗೂ ಸಾಧ್ಯವಿಲ್ಲ.
ReplyDelete@Subramanya: kavanadalli adaka vaagiruva bhaava, adakke saat needida saalu, bichitta reeti yella ishta aaytu. Heege Mundu variyali :)
ReplyDeletethanks sir, @veerabhadra hegde , nimma protsahave prerane :)
ReplyDelete